ಗುಡ್ಡೆಟ್ಟು ಶ್ರೀ ವಿನಾಯಕ ದೇವಸ್ಥಾನವು ಭಾರತದ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿದೆ . ಇದು ಗಣಪತಿ ದೇವರಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ. ಇದನ್ನು ಜಲಧಿವಾಸ ಗಣಪತಿ ದೇವಾಲಯ ಎಂದೂ ಕರೆಯುತ್ತಾರೆ. ಇದು ಭಾರತದ ಏಕೈಕ ಜಲಧಿವಾಸ ಗಣಪತಿ ದೇವಾಲಯವಾಗಿದೆ. ಗಣೇಶನ ಮೂರು ಅಡಿಯ ವಿಗ್ರಹವು ಬಂಡೆಯಿಂದ ಹೊರಹೊಮ್ಮಿದೆ ಎಂದು ನಂಬಲಾಗಿದೆ. ದೇವಸ್ಥಾನದಲ್ಲಿ ಪ್ರತಿದಿನ ಆಯಿರ ಕೊಡ ಸೇವೆ, ತೈಲಾಭ್ಯಂಜನ, ಪಂಚಾಮೃತ ಮತ್ತು ರುದ್ರಾಭಿಷೇಕ ನಡೆಯುತ್ತದೆ. ಈ ದೇವಾಲಯವು ಗುಡ್ಡೆಟ್ಟು ಅಡಿಗರ ಮನೆತನಕ್ಕೆ ಸೇರಿದ್ದು. == ಸಹ ನೋಡಿ == ಗಣೇಶ ದೇವಸ್ಥಾನ, ಇಡಗುಂಜಿ ಗಣೇಶ ದೇವಸ್ಥಾನ, ಮೋರ್ಗಾಂವ್ ಗಣೇಶ ದೇವಾಲಯಗಳ ಪಟ್ಟಿ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅಧಿಕೃತ ಜಾಲತಾಣ